ಗೌರಿ ಗಣೇಶ ಹಬ್ಬ ….
Posted by Ashwini | Posted in Personal | Posted on 03-11-2009
Tags: bhagina, Festivals India, Ganesha Festival, ganesha festival and temples, Ganesha Festival Celebration, Gauri Ganesha Festival, Gauri Habba, Gauri pooje, Gowri Festival, gowri ganesh, ಬಾಗಿನ ಗೌರೀ ಹಬ್ಬ ಪೂಜೆ ಗೌರಿ ಗಣೇಶ
0
ನಮ್ಮ ಮನೇಲಿ ಗಣೇಶ ಹಬ್ಬಕ್ಕೆ ಗೌರಿ ಗಣೇಶ ಕೂಡಿಸೋ ಅಭ್ಯಾಸನೆ ಇಲ್ಲ. ನಂಗೆ ಗೊತ್ತಿದ್ದ ಹಾಗೆ ಅಮ್ಮ ಕಡುಬು ಉಂಡೆ ಮಾಡ್ತಾ ಇದ್ರು.ತಿಂದು ಸಾಯಂಕಾಲ ಎಲ್ಲ ಕಡೆ ಗಣೇಶ ನೋಡಕ್ಕೆ ಹೋಗ್ತಾ ಇದ್ವಿ.21 ಗಣೇಶ ನೋಡಕ್ಕೆ ಸಿಕ್ಕದ್ರೆ ಇನ್ನು ಖುಷಿ
.
ಹಾಗಾಗಿ ಮದ್ವೆ ಆದ ಮೇಲೇ ಮೊದಲನೇ ಸಲ ನಮ್ಮೆ ಮನೇಲಿ ಗಣೇಶ ಕೊಡಿಸುದು ಅಂದ್ರೆ ಸ್ವಲ್ಪ ಟೆನ್ಶನ್ ಆಗಿತ್ತು.ಆದ್ರೆ ನಮ್ಮ ಆಂಟಿ ತುಂಬಾ ಗೈಡ್ ಮಾಡಿದ್ರು.ತುಂಬಾ ಸರಳವಾಗಿ ಗೌರಿ ಗಣೇಶ ಪೂಜೆ ಹೇಗೆ ಮಾಡಿದ್ವಿ ಅಂತ ಹೇಳ್ತೀನಿ.
ಮೊದಲೆನೆಯದಾಗಿ ಶಾಪಿಂಗ್ ಲಿಸ್ಟ್ ( ಏನೇನು ತರಬೇಕು ಅದೆಲ್ಲ ಲಿಸ್ಟ್ ಮಾಡ್ಕೊಳ್ಳಿ).
ಗೌರಿ ಪೂಜೆ ಮಾಡಿ ಮುತ್ಯ್ದೆಗೆ ಬಾಗಿನ ಕೊಡಬೇಕು. ಬಾಗಿನಕ್ಕೆ ಬೇಕಾಗುವ ಸಾಮಾನುಗಳು :
ಮೊರ – 2 ಜೊತೆ
ಅಕ್ಕಿ -1 ಕೇಜೀ
ಉದ್ದು ಹೆಸರು ಕಡಲೆ ತೊಗರಿ – ಎಲ್ಲ 1/4 ಕೇಜೀ
ಬೆಲ್ಲದ ಅಚ್ಚು – 2
ತೆಂಗಿನಕಾಯಿ – 1
ವೀಳ್ಯದಲೆ – 5
ಅರಿಶಿನ ಕೋಡು
ಬೆಳ್ಳಿ ಕಾಲುಂಗುರ ( ದುಡ್ಡು)
ಚಿನ್ನದ ತಾಳಿ (ದುಡ್ಡು)
ಬಳೆ
ಕನ್ನಡಿ
ಬಾಚಣಿಗೆ
ಕಾಡಿಗೆ
ಅರಿಶಿನ,ಕುಂಕುಮ ಬಟ್ಟಲು
ಬ್ಲೌಸ್ ಪೀಸ್
ಉಪ್ಪು
ಹುಣಸೆ ಹುಳಿ
ಕಲ್ಲು ಸಕ್ಕರೆ
ಇವಿಷ್ಟು ಬಾಗಿನದ ಸಾಮಾನುಗಳು.
ಇದಲ್ಲದೆ ಮಾವಿನ ಸೊಪ್ಪು,ಅರಿಶಿನ,ಕುಂಕುಮಾ,ಮಂತ್ರಾಕ್ಷತೆ,ಹೂವು,ಹಣ್ಣು,ಗರಿಕೆ,16 ಎಳೆ ಗೆಜ್ಜೆ ವಸ್ತ್ರ, ಬಾಳೆ ಎಲೆ.
ಮೊದಲು ಮೋರನ ಅರಿಶಿನದಿಂದ ಸಾರಿಸಿ , ಕುಂಕುಮದಿಂದ ಎಕ್ಸ್ ಮಾರ್ಕ್ ಹಾಕಿ ಕೊಳ್ಳಬೇಕು. ಆಮೇಲೆ ಅದರ ಒಳಗೆ ಬಾಳೆ ಎಲೆ ಇಟ್ಟು ಮೇಲೆ ಹೇಳಿದ ಎಲ್ಲ ಸಾಮಾನುಗಳನ್ನು ಇಡಬೇಕು .
ಗೌರಿಯನ್ನು ಸಿಂಗರಿಸಿ ಅರಿಶಿನ ಕುಂಕುಮಾ ಅಕ್ಷತೆ ಹಾಕಿ ಪೂಜೆ ಮಾಡಬೇಕು .
ಹಣ್ಣು ಚಿವುಟಿ ನಯ್ವೆಧ್ಯ ಮಾಡಬೇಕು . ಕೊನೆಗೆ ತಂಬಿಟ್ಟು ಆರತಿ ಮಾಡಬೇಕು.
ತಂಬಿಟ್ಟು ಮಾಡಲು ಬೇಕಾಗುವ ಸಾಮನಗಳು
ಹುರಿಗಡಲೆ – 1/2 ಕಪ್
ಕೊಬ್ಬರಿ
ಬೆಲ್ಲ
ಎಲ್ಲ ಸೇರಿಸಿ ಮಿಕ್ಷಿನಲ್ಲಿ ಪುಡಿ ಮಾಡಿ ತುಪ್ಪ ಸೇರಿಸಿ ಕಲಸಿ ಬಟ್ಟಲುಗಳನ್ನೂ ಮಾಡಿಕೊಳ್ಳಬೇಕು.
ಅದರಲ್ಲಿ ತುಪ್ಪದಲ್ಲಿಅಡ್ಡಿ ಹೂ ಬತ್ತಿ ಇತ್ತು ಉರಿಸಿ ಆರತಿ ಮಾಡಬೇಕು.
ಗೌರಿನ ಒಂದು ದಿವ್ಸ,ಮೂರು ದಿವ್ಸ,ಅಥವಾ 5 ದಿವ್ಸ ಕೊಡಿಸ್ತಾರೆ.ನಾನು ಒಂದೇ ದಿವ್ಸ ಕೂಡಿಸಿ ಅದೇ ದಿನ ಸಂಜೆ ಗಂಗಾ ಪೂಜೆ ಮಡಿ ಗೌರಿನ ನೀರಲ್ಲಿ ಬಿಟ್ಟೆ.







Facebook