Featured Post

Shoreline Park

Pics from Shoreline Park in Mountain View.

Read More

ರವೆ ದೋಸೆ

Posted by Ashwini | Posted in Breakfast | Posted on 29-09-2009

Tags: , , , ,

3

ಹೋಟೆಲಲ್ಲಿ ಮಾಡುವ ರವೆ ದೋಸೆಯಲ್ಲಿ ತುಂಬಾ ಎಣ್ಣೆ ಇರುತ್ತೆ ಅಂತ ಮನೇಲಿ ರವೆ ದೋಸೆ ಮಾಡುವುದನ್ನ ಕಲಿತುಕೊಂಡೆ.
ರವೆದೋಸೆಗೆ
ಚಿರೋಟಿ ರವೆ – ೧ ಕಪ್
ಮೈದಾ ಹಿಟ್ಟು – ೧ ಕಪ್
ಕಡಲೆ ಹಿಟ್ಟು – ೨ ಚಮಚ
ಜೀರಿಗೆ – ೭-೮ ಚಮಚ
ಕೊತ್ತಂಬರಿ ಸೊಪ್ಪು
ಹಸಿ ಮೆಣಸು – ೫- ೬

ಎಲ್ಲವನ್ನು ಕಲಸಿ ನೀರು ಹಿಟ್ಟು ಮಾಡಿಕೊಳ್ಳಬೇಕು.( ಸಾದಾ ದೋಸೆ ಹಿಟ್ಟಿಗಿಂತ ನೀರಾಗಿರಬೇಕು)

ನಂತರ ಅದನ್ನು ಹೆಂಚಿನ ಮೇಲೆ ಎತ್ತರದಿಂದ ಸಿಂಪಡಿಸಬೇಕು.ರುಚಿಯಾದ ರವದೋಸೆ ತಯಾರು.