Featured Post

Magadi RanganathaSwamy Temple

This ancient temple of Shri Lord Ranganatha Swamy is located in Magadi which is around 50km from Bangalore.The temple was built during the period of King Cholas and further developed by the kings of Vijayanagara Empire.Gopuram of the temple is in Dravidian style while inside the idol is in standing posture...

Read More

ಪ್ಯಾಲೇಸ್ ಎಸ್ಟೇಟ್ – ಕೊಡಗು – ಮಡಿಕೇರಿ

Posted by Ashwini | Posted in Uncategorized | Posted on 24-06-2009

Tags: , , , , , , , , ,

1

ಕನ್ನಡದಲ್ಲಿ ಒಂದು ಗಾದೆ ಮಾತಿದೆ. “ದೇಶ ನೋಡು,ಕೋಶ ಓದು” ಅಂತ.ಹೀಗೆ ದೇಶ ನೋಡ್ತಾ,ಪುಸ್ತಕಗಳನ್ನು ಓದ್ತಾ ಓದ್ತಾ ನಾವು ಭೌಧಿಕ್ಹವಾಗಿ ಹೆಚ್ಚಿನ ಜ್ಞ್ಯಾನ ಸಂಪಾದನೆ ಮಾಡ್ತೀವಿ. ಮಾನಸಿಕವಾಗಿ ಬೆಳಿತೀವಿ.ಆದ್ದರಿಂದ ದೇಶ ಸುತ್ತೊದೋ ,ಪುಸ್ತಕಗಳನ್ನ ಓದೋದು ನನ್ನ ಅತ್ಯಂತ ಪ್ರೀತಿಯ ಹವ್ಯಾಸಗಳು.

Palace Estate Home

Palace Estate Home

ಇತ್ತೀಚಿಗೆ ನಾನು ಭೇಟಿ ಕೊಟ್ಟ ಸ್ಥಳ ಕೊಡಗಿನ ಪ್ಯಾಲೇಸ್ ಎಸ್ಟೇಟ್. ಈ ಪ್ಯಾಲೇಸ್ ಎಸ್ಟೇಟ್ ದಟ್ಟವಾಗಿರುವ ಕಾಫಿ ತೋಟಗಳ ಮಧ್ಯೆ ಇರುವ ಸುಂದರ,ಶಾಂತ ಹೋಂ ಸ್ಟೇ(ಮನೆ ವಾಸ).ಬೆಂಗಳೂರಿನ ಧಾವಂತದ ಜೀವನದಿಂದ ಭೇಸತ್ತವರಿಗೆ ನಿಜಕ್ಕೂ ಇದು ಮನಸಿಗೆ ಮುದ ಕೊಡುವ ಆಹ್ಲಾದಕರ ಸ್ಥಳ. ಹಕ್ಕಿಗಳ ಚಿಲಿಪಿಲಿ ಕಲರವ ಬಿಟ್ಟರೆ ನಿಮಗೆ ಯಾವ ಶಬ್ದ ಕೂಡ ಕೇಳಿಸುವುದಿಲ್ಲ :) .ಎಸ್ಟೇಟಿನ ಎರಡು ಸಣ್ಣ ಜಲಪಾತಗಳು ನೋಡುಗರ ಕಣ್ಮನ ಸೆಳೆಯುತ್ತವೆ .

ಪರ್ವತಾರೋಹಣ ಪ್ರಿಯರಿಗೆ ಒಂದು ಟ್ರೆಕ್ಕಿಂಗ್ ಸ್ಪಾಟ್ ಕೂಡ ಇದೆ. ಇದಲ್ಲದೆ ಇತಿಹಾಸ ಪ್ರಿಯರಿಗೆ ಸಮೀಪದಲ್ಲೇ ಕೊಡಗಿನ ಅರಸರ ವಾಸ ಸ್ಥಳವಾಗಿದ್ದ ನಲ್ಕನದ್ ಅರಮನೆ ಇದೆ.ಈ ಅರಮನೆಯ ಗೋಡೆಗಳ ಮೇಲೆ ಹಳೆಯ ಕಾಲದ ವರ್ಣ ಚಿತ್ರಗಳನ್ನು ಕಾಣಬಹುದು . ಕರ್ನಾಟಕ ಸರಕಾರದ ವಾಸ್ತು ಇಲಾಖೆಯಿಂದ ಅರಮನೆಯು ಸಂರಕ್ಷಿಸಲ್ಪಡುತ್ತಿದೆ.

Nalaknad Palace

ಸುಮಾರು 10 km ದೂರದಲ್ಲಿ ಇತುಗಪ್ಪ ದೇವಸ್ಥಾನವಿದೆ. ಬಹಳ ಪ್ರಾಚೀನವಾದ ಈ ದೇವಸ್ಥಾನ ಕೊಡಗು ಸಂಸ್ಕೃತಿಯನ್ನು ಬಿಂಬಿಸುತ್ತದೆ .ಇನ್ನು ಬೇಕಾದರೆ ಕಾಫಿ ತೋಟದಲ್ಲಿ ಒಂದು ಸಣ್ಣ walk ಕೂಡ ಹೋಗಬಹುದು .
“ಅತಿಥಿ ದೇವೋ ಭವ” ಅನ್ನೋ ಮಾತು ಕೊಡಗಿನ ಜನರಿಗೆ ಖಂಡಿತ ಅನ್ವಯ ಆಗುತ್ತೆ. ಅತಿಥಿಗಳನ್ನು ಮನೆಯವರಂತೆ ಆದರಿಸುತ್ತಾರೆ . ಹಾಗೆ ಊಟ , ತಿಂಡಿಗಳು ಕೂಡ ಅಷ್ಟೇ ರುಚಿಯಾಗಿದ್ದವು .ಮಡಿಕೇರಿ ಪಟ್ಟಣದಿಂದ ಸುಮಾರು 30km ದೂರದಲ್ಲಿರುವ ಇಲ್ಲಿಗೆ ನೀವು ಹೋಗಬೇಕುಂದ್ರೆ ಮೊದಲೇ ಅಡ್ವಾನ್ಸ್ ಬುಕಿಂಗ್ ಮಾಡಿರಬೇಕು.ಹೆಚ್ಚಿನ್ನ ಮಾಹಿತಿಗಾಗಿ
ಅಂತರ್ಜಾಲದ ಇ ವೆಬ್ ಸೈಟನ್ನು ಸಂದರ್ಶಿಸಬಹುದು :http://palaceestate.co.in.