Featured Post

Yantrodharaka Hanumaan Temple,Hampi

One of my mom’s favorite temples is Yantrodharaka Hanumanta temple in Hampi. Here you can see the statue of Lord Hanumaan inside Yantra.Hence the name is Yantrodharaka.There is an interesting story behind this temple. Sri Vyasathirtha [Vyasarayaru] , a great scholar, used to meditate everyday...

Read More

ನನ್ನ ಮುತ್ತಜ್ಜಿ ….ರಾಮಕ್ಕ

Posted by Ashwini | Posted in Personal | Posted on 29-09-2009

Tags: , , , , , , ,

0

ನಾನು ಇತ್ತೀಚೆಗೆ ಓದಿದ್ದು ಸುಧಾ ಮೂರ್ತಿಯವರ ೨ ಕಾದಂಬರಿಗಳು ಒಂದು ಋಣ ಇನ್ನೊಂದು ಮಹಾಶ್ವೇತೆ.
ಎರಡು ಕಾದಂಬರಿಗಳು ಸ್ತ್ರೀ ಪಾತ್ರಕ್ಕೆ ಒತ್ತು ಕೊಟ್ಟು ಬರೆದಿರುವಂತಹುದು.ಋಣದಲ್ಲಿ ಬರುವ ಭಾಗೀರಥಿ ಪಾತ್ರ ನನಗೆ ನನ್ನ ಮುತ್ತಜ್ಜಿ ನೆನಪು ತರಿಸಿತು.
ಸಣ್ಣ ವಯಸ್ಸಿಗೆ ವಿಧವೆಯರಾದ ನನ್ನ ಮುತ್ತಜ್ಜಿ ಮತ್ತು ಅವರ ಅಕ್ಕ (ರಾಮಕ್ಕ ,ಕಲ್ಲಕ್ಕ) ತಮ್ಮ ಉದ್ದ ಕೂದಲನ್ನು ಬೋಳಿಸಿ ಮೇಲೊಂದು ಸೆರಗು ಹಾಕಿದ್ದರು. ಇಬ್ಬರು ಸಹಜ ಸುಂದರಿಯರಾಗಿದ್ದರಂತೆ.
೧೦ – ೧೪ ವಯಸ್ಸಿಗೆ ವಿಧವೆಯರಾದ ಅವರನ್ನು ಆಗಿನ ಕಾಲದ ಪದ್ದತಿಯಂತೆ ತಲೆ ಬೋಳಿಸಿ ಕೆಂಪು ಸೀರೆ ಉಡಿಸಿಬಿಟ್ಟರು.ಆಮೇಲೆ ನಮ್ಮ ಅಜ್ಜಿ ಮನೇಲಿ ಆಶ್ರಯ ಪಡೆದ ಅವರಿಗೆ ಒಂದು ಹೊತ್ತಿನ ಊಟ ಮಾತ್ರ ಲಭ್ಯ.ಮನೆಯ ಎಲ್ಲ ಕೆಲಸ ಅವರ ಹೊಣೆ.ಅದೂ ಆಗಿನ ಕಾಲದಲ್ಲಿ ಒನಕೆಯಿಂದ ಪುಡಿ ಕುಟ್ಟು,ರುಬ್ಬು ,ಸಾರಿಸು,ಗುಡಿಸು ಹೀಗೆ ಮನೆಗೆ ಅವರು ಗಾಣದ ಎತ್ತುಗಳು. ಯಾವುದೇ ಹಬ್ಬ , ಹರಿದಿನ ಶುಭ ಸಮಾರಂಭ ಅವರಿಗೆ ಪ್ರವೇಶ ಎಲ್ಲ. ಹೀಗೆ ಜೀವನ ಪೂರ್ತಿ ಬೇರೆಯವರ ಸೇವೆ ಮಾಡುವುದರಲ್ಲಿ ಕಳೆದ ತ್ಯಾಗ ಜೀವಿಗಳು.

ಮನೆ ಕೆಲಸ ಬಿಟ್ಟು ಅವರಿಗೆ ಬೇರೆ ಪ್ರಪಂಚ ಇಲ್ಲ. ಇಷ್ಟಾದರೂ ಅವರೆಂದೂ ಯಾರ ಮೇಲೋ ಒಂದು ಕೆಟ್ಟ ಮಾತು ಆಡಿಲ್ಲ. ತಮ್ಮ ಪಾಲಿಗೆ ಬಂದದ್ದೆ ಪಂಚಾಮ್ರತ ಅಂತ ತಿಳಿದು ಕೊನೆವರಗೂ ಹಾಗೆ ಬದುಕಿದವರು.ರಾಮಕ್ಕನಿಗೆ ಕೊನೆಗೆ ತೊನ್ನು ( ಬಿಳುಪು) ಬಂತು.ಹಳ್ಳಿ ಜನರ ಮೂಢ ನಂಬಿಕೆಗೆ ರಾಮಕ್ಕನ್ನೂ ಬಲಿಯಾಗಬೇಕಾಯಿತು.ಮನೆಯೊಳಗೆ ಹೋಗದೆ ಹೊರಗಡೆ ಸಣ್ಣ ಗುಡಿಸಲಲ್ಲಿ ತಮ್ಮ ಕೊನೆ ದಿನಗಳನ್ನು ಕಳೆದರು.
ಸುಧಾ ಮೂರ್ತಿಯರ ಋಣ ನನ್ನ ರಾಮಕ್ಕನನ್ನು ನೆನಪಿಸಿ ಕಣ್ಣಲ್ಲಿ ನೀರು ತರಿಸಿದ್ದು ಮಾತ್ರ ಸುಳ್ಳಲ್ಲ.