Featured Post

Beautiful Vineyards of Sonoma

Napa and Sonoma both the places attract a large crowd of wine lovers.You can visit a variety of Wine making factories here and taste their personal own blend of wines.We visited one among them i.e Benzier Family Vineyards. They took us in a tram over their vineyards and explained their organic wine making...

Read More

ಬೇಲೂರ್ ಹಳೇಬೀಡು ಚಿಕ್ಕಮಗಳೂರ್ …..

Posted by Ashwini | Posted in Uncategorized | Posted on 03-11-2009

Tags:

2

ಮತ್ತೆ ಇನ್ನೊಂದು ವೀಕೆಂಡ್… ಈ ಸಲ ನಮ್ಮ ಪ್ರಯಾಣ ಬೇಲೂರು ಹಳೇಬೀಡು ಚಿಕ್ಕ ಮಗಳೂರ್ ಕಡೆಗೆ.ಅದರಂತೆ ಶನಿವಾರ ಬೆಳಿಗ್ಗೆ 5 ಗಂಟೆಗೆ ಬೆಂಗಳೂರಿಂದ ನಮ್ಮ ಪ್ರಯಾಣ ಆರಂಭ. ಬೆಂಗಳೂರಿಂದ ಸುಮಾರು 225 km ದೂರದಲ್ಲಿರುವ ಬೇಲೂರು ತಲುಪಿದಾಗ ಸಮಯ ಸುಮಾರು 10 30.
ಬೇಲೂರು ಮತ್ತು ಹಳೇಬೀಡು ಹೊಯ್ಸಳರ ಕಾಲದ 2 ಪ್ರಮುಖ ನಗರಗಳು .ಬೇಲೂರಿನ ಪ್ರಮುಖ ಆಕರ್ಷಣೆ ಶ್ರೀ ಚನ್ನಕೇಶವ ದೇವಸ್ಥಾನ.

belur gopura

belur gopura

12 ನೆ ಶತಮಾನದಲ್ಲಿ ಹೊಯ್ಸಳ ಸಾರ್ವಭೌಮ ವಿಷ್ಣುವರ್ಧನನಿಂದ ನಿರ್ಮಿಸಲ್ಪಟ್ಟ ಈ ದೇವಸ್ಥಾನ, ಹೊಯ್ಸಳರ ಶಿಲ್ಪ ಕಲಾ ನಿಪುಣತೆಗೆ ಸಾಕ್ಷಿಯಾಗಿದೆ.ದೇವಸ್ಥಾನದ ಮುಂದೆ ಮಹಾ ಗೋಪುರವಿದೆ , ಗರ್ಭಗುಡಿಯ ಗೋಡೆಗಳಲ್ಲಿ ಸುಮಾರು 42 ಮದನಿಕೆಯರನ್ನು ( ಶಿಲಾ ಬಾಲಿಕೆಯರನ್ನು) ಕಾಣಬಹುದು.

belur gopura

belur


belur gopura

belur


ಒಂದೊಂದು ಕೆತ್ತನೆ ಕೂಡ ಬೇರೆ ಬೇರೆ ನೃತ್ಯ ಭಂಗಿಗಳನ್ನು ತೋರಿಸುತ್ತದೆ. ವಿಷ್ಣುವರ್ಧನ ರಾಣಿ ಶಾಂತಲೆಯ ನೃತ್ಯವೇ ಇದಕ್ಕೆ ಸ್ಫೂರ್ತಿ ಎನ್ನ ಬಹುದು. ಇದಲ್ಲದೆ ವೀರನಾರಾಯಣ ಮತ್ತು ಚೆನ್ನಿಗರಾಯ ದೇವಸ್ಥಾನಗಳು ಇಲ್ಲಿವೆ.
ಬೇಲೂರಿನಿಂದ ಸುಮಾರು 16km ದೂರದಲ್ಲಿರುವ ಹಳೆ ಬೀಡು ಹೊಯ್ಸಳರ ರಾಜಧಾನಿಯಾಗಿತ್ತು.ಕಲ್ಲಿನಲ್ಲಿ ಕಡೆದ ಹೊಯ್ಸಳೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಶಿವಲಿಂಗವಿದೆ.ಮುಂದೆ ಬೃಹದಾಕಾರದ ನಂದಿಯನ್ನು ಕೆತ್ತಲಾಗಿದೆ.
ಎರಡೂ ದೇವಾಲಯಗಳು ನೋಡತಕ್ಕ ಕರ್ನಾಟಕದ ಶಿಲ್ಪ ಕಲಾ ತಾಣಗಳು. ಸಾಮಾನ್ಯ ನೋಟಕ್ಕೆ ನಮಗೆ ಇಲ್ಲಿರುವ ಎಲ್ಲ ಶಿಲ್ಪ ಕಲಾ ಸೂಕ್ಷ್ಮಗಳು ಅರಿವಾಗುವುದಿಲ್ಲ ಆದ್ದರಿಂದ ಅಲ್ಲಿರುವ ಗೈಡ್ ಗಳ ಸಹಾಯ ಪಡೆಯುವುದು ಒಳ್ಳೆಯದು.
ಅಲ್ಲಿಂದ ಹೊರಟು ಚಿಕ್ಕಮಗಳೂರು ತಲುಪಿದಾಗ ರಾತ್ರಿ 8 ಗಂಟೆ. ಚಿಕ್ಕಮಗಳೂರಲ್ಲಿ ನಾವು ವಾಸ್ತವ್ಯ ಹೂಡಿದ್ದು ಒಂದು ಹೋಂ ಸ್ಟೇನಲ್ಲಿ. woodway homestay ಹೆಸರೇ ಹೇಳುವಂತೆ ಸುತ್ತಲು ಮರಗಳು , ಹಸಿರು.
belur gopura

Woodways



belur gopura

Woodways

ನಿಸರ್ಗ ಪ್ರಿಯರಿಗಂತೂ ಹೇಳಿ ಮಾಡಿಸಿದಂತಹ ತಾಣ.ದೂರ ದೂರಕ್ಕೂ ಪಕ್ಷಿಗಳ ಕಲರವ ಬಿಟ್ಟರೆ ಬೇರೇನೂ ಕೇಳಿಸಲ್ಲ. ಚಿಕ್ಕಮಗಳೂರಿನ ಸ್ಪೆಷಲ್ ಕಾಫಿ ಕುಡಿದು ಕಾಫಿ ತೋಟದಲ್ಲಿ ಸಣ್ಣ ವಾಕ್ ಹೋಗಬಹುದು. ಮಲೆನಾಡಿನ ಅಕ್ಕಿ ರೊಟ್ಟಿ ಕಾಯಿ ಚಟ್ನಿ ಕೂಡ ಸವಿಯಬಹುದು. ಮನಸಿಗ್ಗೆ ಮುದ
ನೀಡುವ ಆಹ್ಲಾದಕರ ತಾಣ ಇದು. http://www.woodwayhomestay.com