0
ಅವನೊಬ್ಬ ಹೆಸರಾಂತ ಛಾಯಾಚಿತ್ರಗ್ರಾಹಕ. ಪ್ರಪಂಚದಲ್ಲಿರುವ ಸುಂದರ ದೃಶ್ಯಗಳನ್ನು ಕಂಡಾಗಲೆಲ್ಲಾ ಅವುಗಳನ್ನು ಸೆರೆಹಿಡಿಯುವ ಬಯಕೆ ಅವನದು. ಒಮ್ಮೆ ಹೀಗೆ ಯಾವುದೋ ಒಂದು ಸಮಾರಂಭದಲ್ಲಿ ಅವಳನ್ನು ನೋಡಿದ. ಅವಳ ಚಂದಕ್ಕೆ ಮನಸೋತು ಅದನ್ನು ತನ್ನ ಕೆಮರಾದಲ್ಲಿ ಸೆರೆ ಹಿಡಿಯಲು ಬಯಸಿದ. ಅವಳ ಒಪ್ಪಿಗೆ ಪಡೆಯಲು ಶತಪ್ರಯತ್ನ ಮಾಡಿದ.
ಕೊನೆಗೂ ಅವನ ಕಾಟ ತಾಳಲಾರದೆ ಅವಳು ಒಪ್ಪಿದಳು. ಅವನು ಹಿರಿ ಹಿರಿ ಹಿಗ್ಗಿದ. ತನ್ನ ಪ್ರಯತ್ನ ಸಫಲವಾಯಿತಲ್ಲಾ ಎಂದು ಖುಷಿ ಪಟ್ಟ. ಅವಳು ಹೇಳಿದ ದಿನ, ಒಂದು ನಿಮಿಷವೂ ತಡಮಾಡದೆ, ತನ್ನ ಸಲಕರಣೆಗಳೊಂದಿಗೆ ಸಜ್ಜಾಗಿ ಹೊರಟ. ಮನಸ್ಸು ಹೊಸ ರಾಗ ಹಾಡುತಿತ್ತು, ಕಣ್ಣುಗಳು ಹೊಸ ಕನಸಿನ ನಿರೀಕ್ಷೆಯಲ್ಲಿದ್ದವು. ಎಲ್ಲವೂ ಅವನು ಅಂದು ಕೊಂಡ ಹಾಗೇ ಆಯಿತು. ಆಗಸದಿಂದ ಇಳಿದ ಅಪ್ಸರೆಯಂತೆ ಅವಳು ತಿಳಿ ನೀಲಿ ಬಣ್ಣದ ಸೀರೆಯಲ್ಲಿ ನಸು ನಗುತ್ತಿದ್ದಳು. ಅವನಿಗಾದರೋ ಸ್ವರ್ಗ ಮೂರೇ ಗೇಣು.
ಇನ್ನೇನು ಅವಳ ಚಿತ್ರ ಸೆರೆ ಹಿಡಿಯಬೇಕು ಎನ್ನುವಷ್ಟರಲ್ಲಿ ಅವಳು ಒಂದು ನಿಮಿಷ ಎಂದಳು. ಒಳಗೆ ಹೋಗಿ ಹೊರಬಂದಾಗ ಅವಳ ಸೌಂದಯ೯ವನ್ನೆಲ್ಲಾ ಕಪ್ಪು ಬಣ್ಣದ ಬುಖಾ೯ ಒಳಗೆ ಸೇರಿಸಿಕೊಂಡಿತ್ತು. ಸೆರೆಯಲ್ಲಿ ಬಿಟ್ಟ ಆ ಎರಡು ಕಣ್ಣುಗಳು ಅವನನ್ನೇ ಪಿಳಿ ಪಿಳಿ ನೋಡುತ್ತಿದ್ದವು.
Photo Courtesy :shahinshah.com
Related posts:



Facebook