Featured Post

Sode Shri Vadirajaru

Sode/Sonda,a tiny hamlet is the divine resting place of Shri Vadiraja Teerthru,one of the main saints in Madhwa Parmpare or History.After Shri Raghavendra Swamy,Shri Vadiraja Teerthru is the one who has entered the vrindavana alive.Its believed that he still exist inside the vrindavana in this holy place...

Read More

ಮಂಗಳೂರು ಪತ್ರೊಡೆ

Posted by Ashwini | Posted in Sweets and Snacks | Posted on 29-09-2009

Tags: , , , , ,

0

ಮಳೆಗಾಲದಲ್ಲಿ ಹೆಚ್ಚಾಗಿ ಮಾಡುವ ಪತ್ರೊಡೆ ನನ್ನ ಮೆಚ್ಚಿನ್ನ ತಿಂಡಿಗಳಲ್ಲಿ ಒಂದು.
ಪತ್ರೊಡೆಗೆ ಬೇಕಾಗುವ ಸಾಮಾನುಗಳು :
ಪತ್ರೊಡೆ ಎಲೆ : 4
ಅಕ್ಕಿ : 400 ಗ್ರಾಂ
ಕೊತ್ತಂಬರಿ ಬೀಜ : 50 gram
ಒಣ ಮೆಣೆಸಿನಕಾಯಿ : 8
ಹುಳಿ : 10 ಗ್ರಾಂ
ತೆಂಗಿನಕಾಯಿ ತುರಿ : 50 ಗ್ರಾಂ
ಉಪ್ಪು

ಒಗ್ಗರಣೆಗೆ:
ಎಣ್ಣೆ
ಸಾಸಿವೆ
ಉದ್ದಿನಬೇಳೆ
ಕರಿಬೇವು
ತೆಂಗಿನ ತುರಿ
ಬೆಲ್ಲ

img_2535

ಮಾಡುವ ವಿಧಾನ :
ಅಕ್ಕಿಯನ್ನು ಒಂದು ಗಂಟೆ ಮೊದಲು ನೀರಲ್ಲಿ ನೆನಸಬೇಕು.
ಆಮೇಲೆ ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ರುಬ್ಬ ಬೇಕು.
ಪತ್ರೊಡೆ ಎಲೆಗಳನ್ನು ಸಣ್ಣದಾಗಿ ಹೆಚ್ಚಿಕೊಂಡು ಹಿಟ್ಟಿನೊಡನೆ ಕಲಸಿ ಹಬೆಯಲ್ಲಿ ( ಇಡ್ಲಿ ಬೇಯಿಸಿದಂತೆ) ಬೇಯಿಸಬೇಕು.

Patrode

Patrode
ಗಟ್ಟಿಯಾದ ಪತ್ರೊಡೆಯನ್ನು ಪುಡಿ ಮಾಡಿ ಒಗ್ಗರಣೆ ಹಾಕಬೇಕು.
ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ , ಸಾಸಿವೆ,ಕರಿಬೇವಿನ ಎಲೆ, ಉದ್ದಿನ ಬೇಳೆ, ತೆಂಗಿನ ತುರಿ,ಬೆಲ್ಲ ಹಾಕಿ , ಪತ್ರೊಡೆ ಪುಡಿ ಹಾಕಿ ಒಗ್ಗರಿಸಬೇಕು.


Patrode

Related posts:

  1. ಗೋಳಿಬಜೆ

Write a comment