Posted by Ashwini | Posted in Breakfast | Posted on 29-09-2009
3
ಹೋಟೆಲಲ್ಲಿ ಮಾಡುವ ರವೆ ದೋಸೆಯಲ್ಲಿ ತುಂಬಾ ಎಣ್ಣೆ ಇರುತ್ತೆ ಅಂತ ಮನೇಲಿ ರವೆ ದೋಸೆ ಮಾಡುವುದನ್ನ ಕಲಿತುಕೊಂಡೆ.
ರವೆದೋಸೆಗೆ
ಚಿರೋಟಿ ರವೆ – ೧ ಕಪ್
ಮೈದಾ ಹಿಟ್ಟು – ೧ ಕಪ್
ಕಡಲೆ ಹಿಟ್ಟು – ೨ ಚಮಚ
ಜೀರಿಗೆ – ೭-೮ ಚಮಚ
ಕೊತ್ತಂಬರಿ ಸೊಪ್ಪು
ಹಸಿ ಮೆಣಸು – ೫- ೬

ಎಲ್ಲವನ್ನು ಕಲಸಿ ನೀರು ಹಿಟ್ಟು ಮಾಡಿಕೊಳ್ಳಬೇಕು.( ಸಾದಾ ದೋಸೆ ಹಿಟ್ಟಿಗಿಂತ ನೀರಾಗಿರಬೇಕು)

ನಂತರ ಅದನ್ನು ಹೆಂಚಿನ ಮೇಲೆ ಎತ್ತರದಿಂದ ಸಿಂಪಡಿಸಬೇಕು.ರುಚಿಯಾದ ರವದೋಸೆ ತಯಾರು.

Posted by Ashwini | Posted in Sweets and Snacks | Posted on 29-09-2009
0
ಮಳೆಗಾಲದಲ್ಲಿ ಹೆಚ್ಚಾಗಿ ಮಾಡುವ ಪತ್ರೊಡೆ ನನ್ನ ಮೆಚ್ಚಿನ್ನ ತಿಂಡಿಗಳಲ್ಲಿ ಒಂದು.
ಪತ್ರೊಡೆಗೆ ಬೇಕಾಗುವ ಸಾಮಾನುಗಳು :
ಪತ್ರೊಡೆ ಎಲೆ : 4
ಅಕ್ಕಿ : 400 ಗ್ರಾಂ
ಕೊತ್ತಂಬರಿ ಬೀಜ : 50 gram
ಒಣ ಮೆಣೆಸಿನಕಾಯಿ : 8
ಹುಳಿ : 10 ಗ್ರಾಂ
ತೆಂಗಿನಕಾಯಿ ತುರಿ : 50 ಗ್ರಾಂ
ಉಪ್ಪು
ಒಗ್ಗರಣೆಗೆ:
ಎಣ್ಣೆ
ಸಾಸಿವೆ
ಉದ್ದಿನಬೇಳೆ
ಕರಿಬೇವು
ತೆಂಗಿನ ತುರಿ
ಬೆಲ್ಲ

ಮಾಡುವ ವಿಧಾನ :
ಅಕ್ಕಿಯನ್ನು ಒಂದು ಗಂಟೆ ಮೊದಲು ನೀರಲ್ಲಿ ನೆನಸಬೇಕು.
ಆಮೇಲೆ ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ರುಬ್ಬ ಬೇಕು.
ಪತ್ರೊಡೆ ಎಲೆಗಳನ್ನು ಸಣ್ಣದಾಗಿ ಹೆಚ್ಚಿಕೊಂಡು ಹಿಟ್ಟಿನೊಡನೆ ಕಲಸಿ ಹಬೆಯಲ್ಲಿ ( ಇಡ್ಲಿ ಬೇಯಿಸಿದಂತೆ) ಬೇಯಿಸಬೇಕು.


ಗಟ್ಟಿಯಾದ ಪತ್ರೊಡೆಯನ್ನು ಪುಡಿ ಮಾಡಿ ಒಗ್ಗರಣೆ ಹಾಕಬೇಕು.
ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ , ಸಾಸಿವೆ,ಕರಿಬೇವಿನ ಎಲೆ, ಉದ್ದಿನ ಬೇಳೆ, ತೆಂಗಿನ ತುರಿ,ಬೆಲ್ಲ ಹಾಕಿ , ಪತ್ರೊಡೆ ಪುಡಿ ಹಾಕಿ ಒಗ್ಗರಿಸಬೇಕು.

Posted by Ashwini | Posted in Personal | Posted on 29-09-2009
0
Ingredients :
Chana Dal – 1 cup
Dry Red Chillies – 10 – 120
Hing – 1 pinch
Salt -1 tsp ( to taste)

Dry roast everything in a pan till the chanadal turns in to reddish brown color.Grind in to a smooth powder and store it in a air tight container.
Posted by Ashwini | Posted in Sweets and Snacks | Posted on 29-09-2009
1
ಗೋಳಿಬಜೆ ಕರಾವಳಿಯಲ್ಲಿ ಮಾಡುವ ವಿಶೇಷ ತಿಂಡಿ.ಅದರಲ್ಲೂ ಉಡುಪಿ ಮಂಗಳೂರಲ್ಲಿ ಮಾಡುವ ಗೋಳಿಬಜೆಯ ರುಚಿಯೇ ಬೇರೆ.ಉಡುಪಿ ಮಿತ್ರ ಸಮಾಜದಲ್ಲಿ ಮಾಡುವ ಗೋಳಿಬಜೆ ರುಚಿ ನಾನು ಎಂದೂ ಮರೆಯಲ್ಲ.
ಗೋಳಿಬಜೆ ಮಾಡಲು ಬೇಕಾಗುವ ಸಾಮಾನುಗಳು ಈ ರೀತಿ ಇವೆ.
ಮೈದಾ ಹಿಟ್ಟು – ೧ ಕಪ್
ಕಡಲೆ ಹಿಟ್ಟು – ೧ ಕಪ್
ಅಡಿಗೆ ಸೋಡಾ – ೧/೪ ಚಮಚ
ಹಸಿಮೆಣಸು – ೩-೪
ಉಪ್ಪು
ಕೊತ್ತಂಬರಿ ಸೊಪ್ಪು,ಕರಿಬೇವು ಮತ್ತು ಶುಂಠಿಯನ್ನು ಸಣ್ಣಗೆ ಹೆಚ್ಚಿ ಹಾಕಬೇಕು.

ಎಲ್ಲವನ್ನು ಬೋಂಡ ಹಿಟ್ಟಿನ ಹದಕ್ಕೆ ಕಲಸಿ ಸಣ್ಣಗಿನ ಉರಿಯಲ್ಲಿ ಕರಿಯಬೇಕು.
